SCHOOL

ಸಾಧನೆಯ ಹಾದಿಯಲ್ಲಿ ಸೇವಾ ವಿದ್ಯಾಲಯ….

ಸೇವಾ ಸಂಸ್ಥೆಯು ೧೯೯೮ರಲ್ಲಿ ನೋಂದಾಯಿತ ಸ್ವಯಂ ಸೇವಾ ಸಂಸ್ಥೆಯಾಗಿ ಕಾರ್ಯವನ್ನು ಪ್ರಾರಂಭಿಸಿ ತನ್ನ ಸೇವೆಯನ್ನು ಕಲೆ,ಶೈಕ್ಷಣಿಕ,ಸಾಮಾಜಿಕ ಹಾಗೂ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮಹಿಳಾ ಮತ್ತು ಮಕ್ಕಳ ಕ್ಷೇತ್ರದಲ್ಲಿ, ಯುವಜನರ ಅಭಿವೃದ್ದಿಯಂತಹ ಯೋಜನೆಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತ ಸಾಗಿದೆ. ರಾಜ್ಯ , ಕೇಂದ್ರ ಸರಕಾರದ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಹಲವಾರು ಕಾರ್‍ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ.

ಇದೇ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ  ಸೇವಾ ವಿದ್ಯಾಲಯ  ಪ್ರಾಥಮಿಕ ಮತ್ತು ಪ್ರೌಢಶಾಲೆ.ಯನ್ನು ಕಿನ್ನಾಳ  ಗ್ರಾಮದಲ್ಲಿ ದಿ. ೧೧-೬-೨೦೦೩ರಲ್ಲಿ ಪ್ರಾರಂಭಿಸಲಾಯಿತು.   ಹೈದ್ರಾಬಾದ್ ಕರ್ನಾಟಕ ಶೈಕಣೀಕವಾಗಿ ಅತ್ಯಂತ ಹಿಂದುಳಿದಿರುವ ಪ್ರದೇಶ. ಅದರಲ್ಲೂ ಕೊಪ್ಪಳ ಮತ್ತು  ಯಲಬುರ್ಗಾ ತಾಲೂಕುಗಳಲ್ಲಿ ಜೀವನಮಟ್ಟ ಹಾಗೂ ಶೈಕ್ಷಣಿಕ ಮಟ್ಟ ಬಹಳ ಹಿಂದೆ ಇದೆ. ಇದರ ಬಗ್ಗೆ ನಂಜುಂಡಪ್ಪ ವರದಿಯಲ್ಲೂ ಪ್ರಸ್ತಾಪಿಸಲಾಗಿದೆ. ಇಂತಹ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಗುಣಮಟ್ಟದ  ಶಿಕ್ಷಣ ನೀಡಬೇಕು ಅದರಲ್ಲೂ ನಗರ ಪ್ರದೇಶದ ಮಕ್ಕಳೊಂದಿಗೆ ಸ್ಪರ್ಧಿಸುವಂತಾಗಬೇಕು ಎನ್ನುವ ದೃಷ್ಟಿಯಿಂದ  ಕಿನ್ನಾಳದಂತಹ ಗ್ರಾಮೀಣ ಪ್ರದೇಶದಲ್ಲಿ ಆಂಗ್ಲ ಮಾಧ್ಯಮ ಶಾಲೆಯನ್ನು ಆರಂಭಿಸಲಾಯಿತು.    ೧೪ ಮಕ್ಕಳಿಂದ ಪ್ರಾರಂಭವಾದ ಶಾಲೆ ಇಂದು ೩೧೦ ಮಕ್ಕಳಿಗೆ ಮತ್ತು ಕೊಪ್ಪಳ ಮತ್ತು  ಯಲಬುರ್ಗಾ ತಾಲೂಕಿನ ೧೦ಕ್ಕೂ ಹೆಚ್ಚು ಗ್ರಾಮಗಳಾದ ಕಿನ್ನಾಳ, ಮುದ್ಲಾಪೂರ,ಮಾದಿನೂರ, ಕಲಕೇರಿ, ಬುಡಶೆಟ್ನಾಲ, ದೇವಲಾಪೂರ, ಕದ್ರಳ್ಳಿ, ಮುತ್ತಾಳ, ರ್‍ಯಾವಣಕಿ,ಮಂಗಳೂರ, ಹಿರೇಬೀಡನಾಳ ಗ್ರಾಮದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತ ಸಾಗಿದೆ. ಅನುಭವಿ ಮತ್ತು ಸಕ್ಷಮ ಸಿಬ್ಬಂದಿಯೊಂದಿಗೆ ಕಾರ್‍ಯನಿರ್ವಹಿಸುತ್ತಿದೆ.   ಶಾಲೆಯ ಶಿಕ್ಷಕರ ಭೋದನಾ ಹಾಗೂ ಮಕ್ಕಳ ಕಲಿಕಾ ಗುಣಮಟ್ಟದ ಬಗ್ಗೆ ಪ್ರಶಂಸನೀಯ ಮಾತುಗಳು ನಮ್ಮನ್ನು ಮತ್ತಷ್ಟು ಗುಣಮಟ್ಟದ  ಶಿಕ್ಷಣ ನೀಡಲು ಪ್ರೇರೆಪಿಸುತ್ತಿವೆ.   ಇಲ್ಲಿಯವರೆಗೆ ಎಸ್ ಎಸ್ ಎಲ್ ಸಿಯ ಎರಡು ಬ್ಯಾಚ್ ಗಳು ಹೊರಬಂದಿದ್ದು ಮೊದಲ ಬ್ಯಾಚ್ ೨೦೧೫-೧೬ರಲ್ಲಿ ಶೇ.೧೦೦% ಸಾಧನೆ ಹಾಗೂ ೨೦೧೬-೧೭ರ ಸಾಲಿನಲ್ಲಿ ಶೇ.೭೨% ಫಲಿತಾಂಶ ಪಡೆದಿದೆ. ಅಲ್ಲದೇ ಪ್ರತಿವರ್ಷ ನವೋದಯ, ಕಿತ್ತೂರು ರಾಣಿ ಚೆನ್ನಮ್ಮ, ಆದರ್ಶ ಮತ್ತು  ಮುರಾರ್ಜಿ ಶಾಲೆಗಳಿಗೆ ನಮ್ಮ ಶಾಲೆಯ ಮಕ್ಕಳು ಆಯ್ಕೆಯಾಗಿದ್ದಾರೆ.