NGO

ಸರಕಾರೇತರ ಸಂಸ್ಥೆಯಾಗಿ ಸೇವಾ

ಸೇವಾ ಸಂಸ್ಥೆಯು ನವಂಬರ್ ೨೫, ೧೯೯೮ರಲ್ಲಿ ಸ್ವಯಂ ಸೇವಾ ಸಂಸ್ಥೆಯಾಗಿ ನೋಂದಾಯಿಸಿಕೊಂಡು  ಸೇವಾ ಸಂಸ್ಥೆಯು ನವಂಬರ್ ೨೫, ೧೯೯೮ರಲ್ಲಿ ಸ್ವಯಂ ಸೇವಾ ಸಂಸ್ಥೆಯಾಗಿ ನೋಂದಾಯಿಸಿಕೊಂಡು (ರಿ.ನಂ. ಎಸ್‌ಆರ್‌ಓ ೬೨/೯೮-೯೯) ತನ್ನ ಕಾರ್ಯಚಟುವಟಿಕೆಯನ್ನು ಪ್ರಾರಂಭಿಸಿತು.

 

ತನ್ನ ಸೇವೆಯನ್ನು ಕಲೆ,ಶೈಕ್ಷಣಿಕ, ಸಾಮಾಜಿಕ ಹಾಗೂ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮಹಿಳಾ ಮತ್ತು ಮಕ್ಕಳ ಕ್ಷೇತ್ರದಲ್ಲಿ, ಯುವಜನರ ಅಭಿವೃದ್ದಿಯಂತಹ ಯೋಜನೆಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತ ಸಾಗಿದೆ. ರಾಜ್ಯ , ಕೇಂದ್ರ ಸರಕಾರದ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಹಲವಾರು ಕಾರ್‍ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ.    ನಮ್ಮ ಸಂಸ್ಥೆಯಿಂದ ಕರಾಟೆ ತರಬೇತಿ ಪ್ರಾರಂಭಿಸಿ ಹನ್ನೊಂದು ಜಿಲ್ಲೆಗಳಲ್ಲಿ ನೂರಕ್ಕೂ ಹೆಚ್ಚು ತರಬೇತಿ ಕೇಂದ್ರಗಳನ್ನು ನಡೆಸಿದೆ. ೫೮ ಕರಾಟೆ ತರಬೇತುದಾರರನ್ನಾಗಿ ಮಾಡಿ ಅವರಿಗೆ ಬ್ಲಾಕ್ ಬೆಲ್ಟ್ ನೀಡಿದೆ. ಸಂಸ್ಥೆಯಲ್ಲಿ ತರಬೇತಿ ಪಡೆದ ಕರಾಟೆಪಟುಗಳು ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಕಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ರಾಜ್ಯ ಮತ್ತು ಕೇಂದ್ರ ಸರಕಾರದ ಯೋಜನೆಗಳೊಂದಿಗೆ ಸಹಭಾಗಿಯಾಗಿ ಸಂಪೂರ್ಣ ಸ್ವಚ್ಛತಾ ಆಂದೋಲನಾ, ಸುವರ್ಣಗ್ರಾಮ ಯೋಜನೆ, ಜಲಾನಯನ ಅಭಿವೃದ್ದಿ ಯೋಜನೆ, ಬಾಲ ಕಾರ್ಮಿಕ ಪುನರ್ವಸತಿ ಕೇಂದ್ರ, ಸರ್ವಶಿಕ್ಷಣ ಅಭಿಯಾನದ ಕೇಂದ್ರಗಳು ಮತ್ತು ಗ್ರಾಮೀಣ ಮಹಿಳೆಯರಿಗೆ ಸ್ವಸಹಾಯ ಸಂಘಗಳ ರಚನೆ ಹಾಗೂ ಪುಸ್ತಕಗಳ ನಿರ್ವಹಣೆ , ಬ್ಯಾಂಕ್ ಲಿಂಕೇಜ್ ನಂತಹ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬಂದಿದೆ. ೨೦೧೪ರಿಂದ ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಕೌಟುಂಬಿಕ ಸಲಹಾ ಕೇಂದ್ರವನ್ನು ಕೇಂದ್ರ ಸರಕಾರದ ಕೇಂದ್ರ ಸಮಾಜ ಮಂಡಳಿಯ ಅನುದಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಜಿಲ್ಲೆಯ ನೊಂದ ಕುಟುಂಬಗಳಿಗೆ ಮಾರ್ಗದರ್ಶನ ಮತ್ತು ಪರಿಹಾರಗಳನ್ನು ಯಶಸ್ವಿಯಾಗಿ ಕಲ್ಪಿಸುತ್ತಾ ಬರುತ್ತಿದೆ.  ಇದೇ ಮಂಡಳಿಯ ಅನುದಾನದಲ್ಲಿ ಶಿಶುಪಾಲನಾ ಕೇಂದ್ರಗಳನ್ನು ನಿರ್ವಹಿಸುತ್ತಿದೆ. ಮಡಿಕೇರಿಯಲ್ಲಿ ನಾಗರಿಕ ಸಹಾಯವಾಣಿ ಕೇಂಧ್ರವನ್ನು ಯಶಸ್ವಿಯಾಗಿ ನಿರ್ವಹಿಸಿದೆ.

ಸಾಮಾಜಿಕ ಬದ್ದತೆಯೊಂದಿಗೆ ಹಲವಾರು ಚಳುವಳಿಗಳ ಭಾಗವಾಗಿ ನೊಂದವರ, ಶೋಷಿತರ, ದೀನ ದಲಿತರ, ಮಹಿಳೆಯರ ಧ್ವನಿಯಾಗಿ ಹೋರಾಡುತ್ತಿದೆ.